ಕಂಡು ಕಂಡೂ

ಪುರಂದರ ದಾಸರು

ಕಂಡು ಕಂಡೂ ನೀ ಎನ್ನ ಕೈ ಬಿಡುವರೇ ಕೃಷ್ಣ

ಪುಂಡರಿಕಾಕ್ಷ ಶ್ರೀ ಪುರುಷೋತ್ತಮ ದೇವ || ಪ ||

ಬಂಧುಗಳು ಎನಗಿಲ್ಲ ಬದುಕಿನಲಿ ಸುಖವಿಲ್ಲ

ನಿಂದೆಯೋಳು ನೊಂದೆನಯ್ಯ ನೀರಾಜಾಕ್ಷ

ತಂದೆತಾಯಿಯು ನೀನೆ ಬಂಧು ಬಳಗವು ನೀನೆ...

ಎಂದೆದಿಗೂ ನಿನ್ನ ಬಿಡೆನು ಗೋವಿಂದಾ || 1 ||

ಕ್ಷಣವೊಂದು ಯುಗವಾಗಿ ತ್ರಿಣಕಿಂತ ಕಡೆಯಾಗಿ

ಎಣಿಸಲಳವಲ್ಲ ಈ ಭವದ ವ್ಯಥೆಯಾ

ಸನಾಕಾದಿ ಮುನಿ ವಂದ್ಯ ವನಜ ಸಂಭವ ಜನಕ

ಪನಿಶಾಯಿ ಪ್ರಹ್ಲಾದಗೊಲಿದ ಶ್ರೀ ಕೃಷ್ಣ || ೨ ||

ಭಕ್ತ ವತ್ಸಲನೆಂಬ ಬಿರುದು ಪೊತ್ತ ಮೇಲೆ

ಭಕ್ತರಾಧಿನಾಗಿರಬೇಡವೆ

ಮುಕ್ತಿದಾಯಕ ನೀನು ಹೊನ್ನುರು ಪುರವಾಸ

ಶಕ್ತ ಗುರು ಪುರಂದರ ಶ್ರೀ ವಿಠಲ ಶ್ರೀ ಕೃಷ್ಣ || ೩ ||